ಆದಿಶೇಷ
	ಬ್ರಹ್ಮನ ಮರಿಮಗ. ತಂದೆ ಮಾರೀಚಿ (ಕಶ್ಯಪ ಅಥವಾ ಕಾಶ್ಯಪ). ಅಜ್ಜ ಮರೀಚಿ. ಸೃಷ್ಟಿ ಕಾರ್ಯದಲ್ಲಿ ಚತುರ್ಮುಖ ಬ್ರಹ್ಮನಿಗೆ ಎರಡನೆಯವನಾಗಿ ಪುತ್ರಕಾಮೇಷ್ಟಿಯನ್ನು ಸಾಧಿಸಿ ದೈತ್ಯ, ದಾನವ, ಗರುಡ, ಗಂಧರ್ವ, ನಾಗ, ಪಶು, ಪಕ್ಷಿ, ತರು, ಗುಲ್ಮಗಳೆಲ್ಲವನ್ನೂ ಪಡೆದುದಲ್ಲದೆ ಕದ್ರು ಎಂಬ ಹೆಂಡತಿಯಿಂದ ನಾಗಸಂತತಿಯನ್ನು ಹೊಂದಿದ. ಈ ಸಂತತಿಯಲ್ಲಿ ಹಿರಿಯನೇ ಆದಿಶೇಷ. ಬ್ರಹ್ಮನನ್ನು ಕುರಿತು ತಪಶ್ಚರ್ಯೆ ಮಾಡಿ, ವರವನ್ನು ಪಡೆದು ಭೂಮಿಯನ್ನೇ ಹೊರುವ ಕೆಲಸದಲ್ಲಿ ನಿಂತ. ಕ್ಷೀರ ಸಮುದ್ರದಲ್ಲಿ ಶ್ವೇತದ್ವೀಪದ ನಡುವೆ, ವಿಷ್ಣುವಿಗೆ ಮಲಗಲು ಹಾಸಿಗೆಯಾಗಿ ನೆರವಾದ.							
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ